ನಿಂತಿರುವೆ ಅಲ್ಲೇ
ನೀ ಬಿಟ್ಟು ಹೋದ
ಆ ದಾರಿಯಲ್ಲಿ….
ಕೈಯನ್ನು ಎದೆಗೆ ಅಪ್ಪಿ
ಮಳೆಯಲ್ಲಿ ನೆನೆಯುತ್ತಾ,
ಚಳಿಯಲ್ಲಿ ನಡುಗುತ್ತಾ,
ನಿನ್ನದೇ ದಾರಿಯನ್ನು ಕಾಯುತ್ತಾ….
ಮನ ಮಿಡಿಯುತಿದೆ
ನಿನಗಾಗಿ….
ಕಂಗಳು ಅರಸುತ್ತಿವೆ
ನಿನ್ನನ್ನು….
ಒಮ್ಮೆ ತಿರುಗಿ ಬಾ….
ನಿಂತಿರುವೆ ಅಲ್ಲೇ
ನೀ ಬಿಟ್ಟು ಹೋದ
ಆ ದಾರಿಯಲ್ಲಿ….
ವಿಧಾತ್ರಿ ಭಟ್